ಕಾವ್ಯ ಲಹರಿ//ರಘುನಂದನ ಕೆ.
ಸಂಸ್ಕೃತ ಭಾಷೆಯ ಅಭ್ಯುದಯದ ಪ್ರಯತ್ನಗಳ
ಕುರಿತಂತೆ ಅಲ್ಲಲ್ಲಿ ಚರ್ಚೆಗಳಾಗುತ್ತಿವೆ. ದೇವಭಾಷೆಯ ಮಡಿವಂತಿಕೆಯಿಂದ ಹೊರಬಂದು ಅದು ಬೇಡ ಎನ್ನುವ
ಮತ್ತೊಂದು ಮಡಿವಂತಿಕೆ ಶುರುವಾಗಿದೆಯಾ. ಚರ್ಚೆಯ ಸಾರ ಏನೇ ಇರಲಿ, ಎಲ್ಲ ಭಾಷೆಯಲ್ಲಿ ಅದರದ್ದೇ
ಆದ ಜ್ಞಾನ ಸಂಪತ್ತಿದೆ, ಆ ಭಾಷೆ ಏಕಿಲ್ಲ ಎನ್ನುವುದರ ಜೊತೆಯಲ್ಲೆ ಈ ಭಾಷೆಯ ಬೆಳಕಿಗೂ ಅವಕಾಶವಿರಲಿ
ಎನ್ನುವ ಆಶಯ.
ಕವನ ಕಟ್ಟುವ ಪ್ರಕ್ರಿಯೆಯಲ್ಲಿ ಹೀಗೊಂದು ವಿಷಯವನ್ನ ಇಟ್ಟು, ನನಗೆ ಹೊಸದೆನಿಸುವ ಶೈಲಿಯ ಪ್ರಯತ್ನ ಮಾಡಿದ್ದಷ್ಟೆ, ಇದು ಕವನವಾಗಿದೆಯಾ ಎನ್ನುವುದು ಗೊತ್ತಿಲ್ಲ. ಬರಹಕ್ಕಾಗಿಯೇ ಬರೆದ ಬರಹವಿದು, ರಸ ಸ್ವಾದ ಕಡಿಮೆಯಾದರೆ ಕ್ಷಮೆಯಿರಲಿ.
* * * * * * * *
ಮಡಿಯ ಮಡಿ ಒಂದೆಡೆಯಾದರೆ
ಮೈಲಿಗೆಯ ಮಡಿಯೊಂದೆಡೆ ಮೂಡುತಿದೆ,
ಹಿರಿಯವ್ವ ತಾಯಿಯ ತೊರೆದು
ಸುಕುಮಾರಿ ಮಗಳೊಂದೆ ಸಾಕೆನುತಲಿ
ಅಬ್ಬರಿಸುತಿಹ ಆಧುನಿಕ ಸಂಜಾತರೆದುರು
ಹಿರಿತನದ ಅರಿವು ಸಾಯುತಿದೆ ಕಾಣಾ;
ಶ್ರದ್ಧೆಯ ಶ್ರಾದ್ಧವ ನೋಡೋ ಯುಗ ಪುರುಷ!!
ಮುದಿಭಾಷೆಯ ಜ್ಞಾನಸಾಗರವು ಲವಣವಾಗಿ,
ಯುವಲತೆಯ ಲಾವಣ್ಯದ ಸೊಗಸೊಳ್
ಹಳೆ ಬೇರು ವಿಸ್ಮೃತಿಗೆ ಸರಿಯದಿರಲೆನುತ
ನೀರ ಹಾಯಿಸುವ ಆಸಕ್ತರ ಭಕ್ತಿಯನು
ಧಿಕ್ಕರಿಸುವ ಒಣ ಉನ್ಮಾದವಿರದಿರಲಿ;
ತೆಕ್ಕೆಯೊಳಗೆಳೆದು ಬೆಳೆಯಲಿ ಸಿರಿ ಹರುಷ!!
ಮುಚ್ಚಿದ ಬಿರು ಮೋಡಗಳ ಬೆಟ್ಟ ಸರಿಸಿ
ತಿಳಿವ ತಂಬೆಲರ ಬೆಳಕ ರಾಶಿಯೊಳ್,
ಚರಿತ್ರೆಯ ಮೇಲ್ಗಣ ಹಿಮ ಕರಗಿ
ಗುಪ್ತಾಕಾಶದ ಮಹಾ ತಾರೆ ಮಿನುಗಲ್
ಮಹಾತಾಯಿಗೀಗ ವಾರ್ಧಕ್ಯ ಕಳೆದು
ಸಂಸ್ಕೃತದ ಸೊಬಗ ದೊರಕಿಸೊ ಅನವರತ!!
* * * * * * * * *
ಚಿತ್ರಕೃಪೆ : ಅಂತರ್ಜಾಲ
arthapoorna kavitegegaagi abhinandanegalu.
ReplyDeleteಅಬ್ಬೋ...!
ReplyDeleteಚೆನ್ನಾಗಿದೆ...
ಹೊಸ ಪ್ರಯತ್ನವೇ ಇದು.., ಇಷ್ಟಯಾಯಿತು..