ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Thursday, 10 October 2013

ಸಿಡಿದ ನಿಹಾರಿಕೆಯ ಶಾಪ...

ಕಾವ್ಯ ಲಹರಿ//ರಘುನಂದನ ಕೆ.

ಕಾಯ ಹಿಂಡುವ ಕಾಯಕ
ಬಯಕೆ ಸುಡು ಮೋಹ ಮಾಯಕ
ದೇಹ ಉರಿವ ಕಡು ಕೆಂಡ
ತಣಿಯ ಬಂದವರೆಷ್ಟು
ಹಣಿದು ಹೋದವರೆಷ್ಟು
ಬಯಕೆ ಬೆಂಕಿ ತಣಿಯೆ
ಹಿಂಡಿ ಎಸೆದ ಬದುಕು


ಕಾಯ ಕಾಯ್ವ ಮಾಯೆ
ಒಳ ಹೊರಗೆ ಸುಡು ಜ್ವಾಲೆ
ಅರೆ ಬಿರಿದ ಗುಹೆಯಲ್ಲಿ
ಸರ್ಪ ಚೀತ್ಕಾರದ ನರಳಾಟ
ನಿಶೆ ರಾತ್ರಿಯ ನಶ್ವರದಲ್ಲಿ
ಉಕ್ಕೊ ಬೆಳದಿಂಗಳ ತಾಪ
ಸಿಡಿದ ನಿಹಾರಿಕೆಯ ಶಾಪ


ಹಗಲು ಮೋಹ ಇರುಳು ದಾಹ
ಕರೆವ ಕೊಳಲ ವ್ಯಾಮೋಹ
ಕೆಂಪು ಗೆರೆಗಳಾಚೆ ಕಂಪನ
ಗೋರಂಟಿಯಿರದ ಯೌವನ
ಕುಲುಕಿ ಮುಲುಕಿ ಸೋತು
ಕನಸಿಲ್ಲದ ಗರ್ಭಫಲ
ಸುಟ್ಟ ಕಾಮನೆಗಳ ಕಾಲ


ಮಣಿದು ಹೋದವರಿಲ್ಲ
ಕುಣಿದು ಕೊಂದವರೆಲ್ಲ
ವಾಂಛೆಗಳ ಸುರಿದು ಹೋಗಲು
ಕಮರಿಹೋಯ್ತು ದಾಹ
ಸರಿವ ಕಾಲದ ಮೊರೆತ
ಕುದಿವ ದೇಹದ ಭೋರ್ಗರೆತ
ಉರಿದು ಹೋಯ್ತು ಒಡಲ ಕೆಂಡ


* * * * * * * *
 ಚಿತ್ರಕೃಪೆ : ಅಂತರ್ಜಾಲ

1 comment:

 1. ಹಗಲು ಮೋಹ ಇರುಳು ದಾಹ
  ಕರೆವ ಕೊಳಲ ವ್ಯಾಮೋಹ
  ಕೆಂಪು ಗೆರೆಗಳಾಚೆ ಕಂಪನ
  ಗೋರಂಟಿಯಿರದ ಯೌವನ
  ಕುಲುಕಿ ಮುಲುಕಿ ಸೋತು
  ಕನಸಿಲ್ಲದ ಗರ್ಭಫಲ
  ಸುಟ್ಟ ಕಾಮನೆಗಳ ಕಾಲ

  ತುಂಬಾ ಸುಂದರ ಸಾಲುಗಳು ಮತ್ತು ಇದಕ್ಕೆ ಎರಡರಷ್ಟು
  ಹೊಂದಿಕೆಯಾಗುವ ಚಿತ್ರ...

  ಸುಂದರ.... ಅತಿ ಸುಂದರ.....

  ReplyDelete

ನಿಮ್ಮ ಅನಿಸಿಕೆ