ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Monday, 23 December 2013

ಬುದ್ಧನರಿವಿನ ಯುದ್ಧದಲ್ಲಿ

ಕಾವ್ಯ ಲಹರಿ//ರಘುನಂದನ ಕೆ.

ಮಾತಲ್ಲಿ ಕಥೆಯಲ್ಲಿ
ಕತ್ತಲಿರುಳ ಮೌನದಲ್ಲಿ
ಬುದ್ಧನರಿವಿನ ಯುದ್ಧದಲ್ಲಿ
ತಮವು ತೊರೆಯಿತು
ಅರಿವು ಕರೆಯಿತು



ಗೆಲುವಲ್ಲಿ ಸೋಲಲ್ಲಿ
ಬೆಳಗಲ್ಲಿ ಇರುಳಲ್ಲಿ
ಸಿದ್ಧ ನಡೆವ ದಾರಿಯಲ್ಲಿ
ಕಾಲ ಸರಿಯಿತು
ಬದುಕು ಸವೆಯಿತು


ಮನಸಲ್ಲಿ ಕನಸಲ್ಲಿ
ನನಸುಗಳ ಹಾದಿಯಲ್ಲಿ
ಗೆದ್ದವರು ತುಳಿದ ಬೀದಿಯಲ್ಲಿ
ಮತಿಯು ಕಳೆಯಿತು
ಪಥವು ಬೆಳೆಯಿತು


ನಿನ್ನೆಯಲ್ಲಿ ಇಂದಿನಲ್ಲಿ
ನಾವಿರದ ನಾಳೆಯಲ್ಲಿ
ಸಾವಿರದ ಕಾಲದಲ್ಲಿ
ತೆರೆಯು ಸರಿಯಿತು
ತಾರೆ ಬೆಳಗಿತು



ಭಕ್ತಿಯಲ್ಲಿ ಶಕ್ತಿಯಲ್ಲಿ
ಜ್ಞಾನದೀಪ ಜ್ಯೋತಿಯಲ್ಲಿ
ಅಂತರಾತ್ಮ ಮೌನದಲ್ಲಿ
ಅರಿವು ಹಾಡಿತು
ಬೆಳಕು ಮೂಡಿತು


ಚಿತ್ರಕೃಪೆ : ಅಂತರ್ಜಾಲ

1 comment:

  1. ತುಂಬಾ ಒಳ್ಳೆಯ ಅರಿವು....

    ಯಾರ್ಯಾರಿಗೆ ಎಲ್ಲೆಲ್ಲಿ ಜ್ಞಾನೋದಯವೋ....

    ReplyDelete

ನಿಮ್ಮ ಅನಿಸಿಕೆ