ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Wednesday, 31 October 2012

ಕೊಳಲ ಮರೆತ ಮೋಹನಾ....

ದೇವಾಮೃತ ಗಂಗೆ//ರಘುನಂದನ ಕೆ.


ಯಾವುದೋ ರಾಗ ಯಾವುದೋ ತಾಳ
ಯಾವುದು ತಿಳಿಯದ ಮಾಧುರ್ಯ
ಮೋಹನ ಮುರುಳಿಯ ಯಾವ ಗಾನ
ಸೃಷ್ಟಿಯಲಿ ತುಂಬಿದೆ ಸೌಂದರ್ಯ

ರಾಧೆಯ ಕಂಗಳ ಕಂಬನಿ ಬಿಂದುವು
ಕೃಷ್ಣನ ಪಾದಕೆ ಅಭಿಷೇಕ
ಬೃಂದಾವನದಲಿ ಬೀಸುವ ತಂಗಾಳಿ
ಹೊತ್ತು ತಂದಿದೆ ಸ್ವರ ರಸಪಾಕ

ಹೃದಯದಿ ಉಲಿಯುವ ಕೊಳಲಾ ನಾದ
ಕೃಷ್ಣನ ನೆನಪಾ ಕರೆಯುತಿದೆ
ಜೀವ ಭಾವದೊಳು ಜೊತೆಯಾದವನಾ
ಕಾಣದೆ ಉಸಿರು ಸೋಲುತಿದೆ


ಶಂಖ ಚಕ್ರವ ಹಿಡಿದಾ ಕೈಗಳು
ಮರೆತವೇ ನವಿಲುಗರಿಯಾ ಬಣ್ಣಗಳ
ಸಾಗರ ತೀರದ ಅರಮನೆಯೊಳಗೆ
ಮರೆಯಿತೆ ಯಮುನೆಯ ಅನುರಾಗ

ಕೊಳಲ ಮರೆತು ಹೋದನು ಮೋಹನ
ರಾಧೆಯ ನೆನಪಾದರೂ ಜೊತೆಗುಂಟೇ
ಕೊಳದಾ ತಡಿಯಲಿ ಕೃಷ್ಣನ ನೆನಪು
ರಾಧೆಯ ವಿರಹಕೆ ಕೊನೆಯುಂಟೇ...?

* * * * * * *

ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಕೃಷ್ಣನ ಕವನ ಭಾವಗೀತೆಗಳನ್ನ ಕೇಳುವಾಗೆಲ್ಲ ನಾನೂ ಕೃಷ್ಣನ ಕುರಿತು ಬರೆಯಬಹುದಾ ಅಂತೆಲ್ಲ ಊಹಾಲೋಕದಲ್ಲಿ ವಿಹರಿಸುತ್ತಿದ್ದ ಕಾಲವೊಂದರಲ್ಲಿ ಅರಳಿದ್ದ ಕವನವಿದು. ತುಂಬಾ ಹಿಂದೆ 2006ರಲ್ಲಿ ಕಾಲೇಜು ದಿನಗಳಲ್ಲಿ ಬರೆದಿದ್ದ ಕವನವನ್ನ ಇಲ್ಲಿ ಸಿಂಗರಿಸಬೇಕೆನ್ನಿಸಿತು, ಹಾಕಿದ್ದೇನೆ. ಅಕ್ಷರ - ಓದು ನಮ್ಮೆಲ್ಲರ ಸದಾ ಕಾಡುತ್ತಿರಲಿ.

ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/ ಗೆ ಭೇಟಿ ನೀಡಿ)




2 comments:

  1. ಬೆಳೆಯುತ್ತಿರಲಿ ಕವನ ಸಂಕುಲ......

    ಜೈ..............

    ReplyDelete
  2. tumbaa chandada kavite. koneya saalu radheya virahake koneyunte? heart touching line... uttama gayakaru raga samyojisi hadabahudu.

    ReplyDelete

ನಿಮ್ಮ ಅನಿಸಿಕೆ